2 ಪೂರ್ವಕಾಲವೃತ್ತಾಂತ Chapter 17 KANIRV Bible Verse Images

2 ಪೂರ್ವಕಾಲವೃತ್ತಾಂತ 17 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 2 ಪೂರ್ವಕಾಲವೃತ್ತಾಂತ 17 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


2 ಪೂರ್ವಕಾಲವೃತ್ತಾಂತ 17:1 (KANIRV)
Square Portrait Landscape 4K UHD
ಆಸನ ನಂತರ ಅವನ ಮಗನಾದ ಯೆಹೋಷಾಫಾಟನು ಅರಸನಾದನು. ಅವನು ಇಸ್ರಾಯೇಲರೆದುರು ಪ್ರಬಲನಾಗಿದ್ದನು.

2 ಪೂರ್ವಕಾಲವೃತ್ತಾಂತ 17:2 (KANIRV)
Square Portrait Landscape 4K UHD
ಅವನು ಯೆಹೂದದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳಲ್ಲೂ ಸೈನ್ಯವನ್ನಿರಿಸಿದನು. ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ರ ಪಟ್ಟಣಗಳಲ್ಲಿಯೂ ಅಧಿಕಾರಿಗಳನ್ನು ನೇಮಿಸಿದನು.

2 ಪೂರ್ವಕಾಲವೃತ್ತಾಂತ 17:3 (KANIRV)
Square Portrait Landscape 4K UHD
ಇವನು ಬಾಳ್ ದೇವರುಗಳನ್ನು ಅವಲಂಬಿಸದೆ, ತನ್ನ ಪೂರ್ವಿಕನಾದ ದಾವೀದನ ಮೊದಲಿನ ನಡತೆಯ ಪ್ರಕಾರ ನಡೆಯುತ್ತಿದ್ದದರಿಂದ ಯೆಹೋವನು ಯೆಹೋಷಾಫಾಟನ ಸಂಗಡ ಇದ್ದನು.

2 ಪೂರ್ವಕಾಲವೃತ್ತಾಂತ 17:4 (KANIRV)
Square Portrait Landscape 4K UHD
ಇವನು ಇಸ್ರಾಯೇಲರಂತೆ ನಡೆಯದೆ, ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು.

2 ಪೂರ್ವಕಾಲವೃತ್ತಾಂತ 17:5 (KANIRV)
Square Portrait Landscape 4K UHD
ಆದುದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದುದರಿಂದ ಇವನ ಧನ ಘನತೆಗಳು ಹೆಚ್ಚಾದವು.

2 ಪೂರ್ವಕಾಲವೃತ್ತಾಂತ 17:6 (KANIRV)
Square Portrait Landscape 4K UHD
ಇವನು ಯೆಹೋವನ ಮಾರ್ಗದಲ್ಲಿ ನಡೆದು ಧೈರ್ಯಗೊಂಡನು; ಇದಲ್ಲದೆ ಯೆಹೂದ ದೇಶದಲ್ಲಿದ್ದ ಪೂಜಾಸ್ಥಳಗಳನ್ನೂ, ಅಶೇರ ವಿಗ್ರಹ ಸ್ತಂಭಗಳನ್ನೂ ತೆಗೆದು ಹಾಕಿಸಿದನು.

2 ಪೂರ್ವಕಾಲವೃತ್ತಾಂತ 17:7 (KANIRV)
Square Portrait Landscape 4K UHD
ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.

2 ಪೂರ್ವಕಾಲವೃತ್ತಾಂತ 17:8 (KANIRV)
Square Portrait Landscape 4K UHD
ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರು ಇದ್ದರು. ಎಲೀಷಾಮಾ, ಯೆಹೋರಾಮ್,

2 ಪೂರ್ವಕಾಲವೃತ್ತಾಂತ 17:9 (KANIRV)
Square Portrait Landscape 4K UHD
ಇವರು ಯೆಹೋವನ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದ ಪಟ್ಟಣದಲ್ಲೆಲ್ಲಾ ಸಂಚಾರ ಮಾಡಿ ಜನರಿಗೆ ಬೋಧಿಸಿದರು.

2 ಪೂರ್ವಕಾಲವೃತ್ತಾಂತ 17:10 (KANIRV)
Square Portrait Landscape 4K UHD
ಯೆಹೂದದ ಸುತ್ತಣ ದೇಶಗಳ ರಾಜ್ಯಗಳವರೆಗೆ ಯೆಹೋವನ ಭಯವಿದ್ದುದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ.

2 ಪೂರ್ವಕಾಲವೃತ್ತಾಂತ 17:11 (KANIRV)
Square Portrait Landscape 4K UHD
ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ, ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಪ್ರಾಣಿಗಳ ಹಿಂಡುಗಳಿಂದ ಏಳು ಸಾವಿರದ ಏಳು ನೂರು ಟಗರುಗಳನ್ನೂ, ಏಳು ಸಾವಿರದ ಏಳು ನೂರು ಆಡುಗಳನ್ನೂ ಕೊಡುತ್ತಿದ್ದರು.

2 ಪೂರ್ವಕಾಲವೃತ್ತಾಂತ 17:12 (KANIRV)
Square Portrait Landscape 4K UHD
ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಯೆಹೂದ ದೇಶದಲ್ಲಿ ಕೋಟೆಗಳನ್ನೂ ಮತ್ತು ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು.

2 ಪೂರ್ವಕಾಲವೃತ್ತಾಂತ 17:13 (KANIRV)
Square Portrait Landscape 4K UHD
ಯೆಹೂದದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಗಳಿದ್ದವು. ಯೆರೂಸಲೇಮಿನಲ್ಲಿ ಯುದ್ಧವೀರರಾದ ಭಟರೂ ಇದ್ದರು.

2 ಪೂರ್ವಕಾಲವೃತ್ತಾಂತ 17:14 (KANIRV)
Square Portrait Landscape 4K UHD
ಪೂರ್ವಿಕರ ಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟ ಗೋತ್ರ ಪ್ರಧಾನರು ಯಾರೆಂದರೆ: ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ಯುದ್ಧವೀರರ ಅಧಿಪತಿಯಾದ ಅದ್ನ;

2 ಪೂರ್ವಕಾಲವೃತ್ತಾಂತ 17:15 (KANIRV)
Square Portrait Landscape 4K UHD
ಇವನ ತರುವಾಯ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಯುದ್ಧವೀರರ ಅಧಿಪತಿಯಾದ ಯೆಹೋಹಾನಾನ್;

2 ಪೂರ್ವಕಾಲವೃತ್ತಾಂತ 17:16 (KANIRV)
Square Portrait Landscape 4K UHD
ತರುವಾಯ ಎರಡು ಲಕ್ಷ ಮಂದಿ ಯುದ್ಧವೀರರೊಡನೆ ಸ್ವಇಚ್ಛೆಯಿಂದ ತನ್ನನ್ನೇ ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯನ ಮಗನಾದ ಅಮಸ್ಯ;

2 ಪೂರ್ವಕಾಲವೃತ್ತಾಂತ 17:17 (KANIRV)
Square Portrait Landscape 4K UHD
ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಯುದ್ಧವೀರರ ಅಧಿಪತಿಯಾದ ಎಲ್ಯಾದ;

2 ಪೂರ್ವಕಾಲವೃತ್ತಾಂತ 17:18 (KANIRV)
Square Portrait Landscape 4K UHD
ಒಂದು ಲಕ್ಷದ ಎಂಭತ್ತುಸಾವಿರ ಮಂದಿ ಯುದ್ಧಸನ್ನದ್ಧ ಸೈನಿಕರ ನಾಯಕನಾದ ಯೆಹೋಜಾಬಾದ್ ಎಂಬುವವರು.

2 ಪೂರ್ವಕಾಲವೃತ್ತಾಂತ 17:19 (KANIRV)
Square Portrait Landscape 4K UHD
ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆ ಮಾಡುತ್ತಿದ್ದ ಈ ಯೋಧರಲ್ಲದೆ, ಕೋಟೆ ಕೊತ್ತಲಗಳುಳ್ಳ ಯೆಹೂದ ಪಟ್ಟಣಗಳಲ್ಲಿಯೂ ಸೈನಿಕರಿದ್ದರು.

Available Bible Translations

American Standard Version
2 Chronicles 17 (ASV) »
King James Version
2 Chronicles 17 (KJV) »
GOD’S WORD® (GW)
2 Chronicles 17 (GW) »
World English Bible
2 Chronicles 17 (WEB) »
Louis Segond 1910
2 Chroniques 17 (LSG) »
इंडियन रिवाइज्ड वर्जन - हिंदी
2 इतिहास 17 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਇਤਿਹਾਸ 17 (PANIRV) »
ভারতীয় সংশোধিত সংস্করণ - বাংলা
2 বংশাৱলি 17 (BENIRV) »
இந்தியன் ரீவைஸ்டு வேர்ஷன் - தமிழ்
2 நாளாகமம் 17 (TAMIRV) »
इंडियन रिवाइज्ड वर्जन - मराठी
2 इतिहास 17 (MARIRV) »
ఇండియన్ రేవిజ్డ్ వెర్షన్ - తెలుగు
2 దినవృత్తాంతాలు 17 (TELIRV) »
ઇન્ડિયન રિવાયઝ્ડ વર્ઝન - ગુજરાતી
2 કાળવૃતાંત 17 (GUJIRV) »
الكتاب المقدس باللغة العربية، فان دايك
٢ أخبار 17 (AVD) »
תנ ך עברי מודרני
דברי הימים ב 17 (HEB) »
Bíblia Sagrada Português
2 Crônicas 17 (BSL) »
Kinh Thánh: Tiếng Việt
2 Sử Ký 17 (VIE) »
Reina Valera Antigua
2 Crónicas 17 (RVA) »
圣 经 简体中文和合本
历 代 志 下 17 (CUVS) »
聖 經 繁體中文和合本
歷 代 志 下 17 (CUVT) »
Bibla e Shenjtë
2 Kronikave 17 (ALB) »
Библия на русском
2 Паралипоменон 17 (RUSV) »
Українська Біблія
2 хроніки 17 (UKR) »
Szent Biblia - Magyar
2 Krónika 17 (KAR) »
Българска Библия
2 Летописи 17 (BULG) »
De Heilige Schrift
2 Kronieken 17 (NLD) »

2 ಪೂರ್ವಕಾಲವೃತ್ತಾಂತ (KANIRV) Chapter Selection

KANIRV Book Selection List