ಆದಿಕಾಂಡ Chapter 5 KANIRV Bible Verse Images

ಆದಿಕಾಂಡ 5 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಆದಿಕಾಂಡ 5 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಆದಿಕಾಂಡ 5:1 (KANIRV)
Square Portrait Landscape 4K UHD
ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು.

ಆದಿಕಾಂಡ 5:2 (KANIRV)
Square Portrait Landscape 4K UHD
ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು.

ಆದಿಕಾಂಡ 5:3 (KANIRV)
Square Portrait Landscape 4K UHD
ಆದಾಮನು ನೂರಮೂವತ್ತು ವರ್ಷದವನಾದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.

ಆದಿಕಾಂಡ 5:4 (KANIRV)
Square Portrait Landscape 4K UHD
ಸೇತನು ಹುಟ್ಟಿದ ಮೇಲೆ, ಆದಾಮನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರ್ಷ ಬದುಕಿದನು.

ಆದಿಕಾಂಡ 5:5 (KANIRV)
Square Portrait Landscape 4K UHD
ಆದಾಮನು ಒಟ್ಟು ಒಂಭೈನೂರ ಮೂವತ್ತು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:6 (KANIRV)
Square Portrait Landscape 4K UHD
ಸೇತನು ನೂರ ಐದು ವರ್ಷದವನಾದಾಗ, ಎನೋಷನನ್ನು ಪಡೆದನು.

ಆದಿಕಾಂಡ 5:7 (KANIRV)
Square Portrait Landscape 4K UHD
ಎನೋಷನು ಹುಟ್ಟಿದ ಮೇಲೆ, ಸೇತನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರ ಏಳು ವರ್ಷ ಬದುಕಿದನು.

ಆದಿಕಾಂಡ 5:8 (KANIRV)
Square Portrait Landscape 4K UHD
ಸೇತನು ಒಟ್ಟು ಒಂಭೈನೂರ ಹನ್ನೆರಡು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:9 (KANIRV)
Square Portrait Landscape 4K UHD
ಎನೋಷನು ತೊಂಭತ್ತು ವರ್ಷದವನಾದಾಗ, ಕೇನಾನನನ್ನು ಪಡೆದನು.

ಆದಿಕಾಂಡ 5:10 (KANIRV)
Square Portrait Landscape 4K UHD
ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರ್ಷ ಬದುಕಿದನು.

ಆದಿಕಾಂಡ 5:11 (KANIRV)
Square Portrait Landscape 4K UHD
ಎನೋಷನು ಒಟ್ಟು ಒಂಭೈನೂರ ಐದು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:12 (KANIRV)
Square Portrait Landscape 4K UHD
ಕೇನಾನನು ಎಪ್ಪತ್ತು ವರ್ಷದವನಾದಾಗ, ಮಹಲಲೇಲನನ್ನು ಪಡೆದನು.

ಆದಿಕಾಂಡ 5:13 (KANIRV)
Square Portrait Landscape 4K UHD
ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ನಲ್ವತ್ತು ವರ್ಷ ಬದುಕಿದನು.

ಆದಿಕಾಂಡ 5:14 (KANIRV)
Square Portrait Landscape 4K UHD
ಕೇನಾನನು ಒಟ್ಟು ಒಂಭೈನೂರ ಹತ್ತು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:15 (KANIRV)
Square Portrait Landscape 4K UHD
ಮಹಲಲೇಲನು ಅರವತ್ತೈದು ವರ್ಷದವನಾದಾಗ ಯೆರೆದನನ್ನು ಪಡೆದನು.

ಆದಿಕಾಂಡ 5:16 (KANIRV)
Square Portrait Landscape 4K UHD
ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಮೂವತ್ತು ವರ್ಷ ಬದುಕಿದನು.

ಆದಿಕಾಂಡ 5:17 (KANIRV)
Square Portrait Landscape 4K UHD
ಮಹಲಲೇಲನು ಒಟ್ಟು ಎಂಟುನೂರ ತೊಂಭತ್ತೈದು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:18 (KANIRV)
Square Portrait Landscape 4K UHD
ಯೆರೆದನು ನೂರ ಅರುವತ್ತೆರಡು ವರ್ಷದವನಾದಾಗ ಹನೋಕನನ್ನು ಪಡೆದನು.

ಆದಿಕಾಂಡ 5:19 (KANIRV)
Square Portrait Landscape 4K UHD
ಹನೋಕನು ಹುಟ್ಟಿದ ಮೇಲೆ ಯೆರೆದನು ಎಂಟುನೂರು ವರ್ಷ ಬದುಕಿದನು.

ಆದಿಕಾಂಡ 5:20 (KANIRV)
Square Portrait Landscape 4K UHD
ಯೆರೆದನು ಒಟ್ಟು ಒಂಭೈನೂರ ಅರುವತ್ತೆರಡು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:21 (KANIRV)
Square Portrait Landscape 4K UHD
ಹನೋಕನು ಅರುವತ್ತೈದು ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು.

ಆದಿಕಾಂಡ 5:22 (KANIRV)
Square Portrait Landscape 4K UHD
ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರ್ಷ ಬದುಕಿದನು.

ಆದಿಕಾಂಡ 5:23 (KANIRV)
Square Portrait Landscape 4K UHD
ಹನೋಕನು ಬದುಕಿದ ಒಟ್ಟು ಕಾಲ ಮುನ್ನೂರ ಅರುವತ್ತೈದು ವರ್ಷಗಳು.

ಆದಿಕಾಂಡ 5:24 (KANIRV)
Square Portrait Landscape 4K UHD
ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.

ಆದಿಕಾಂಡ 5:25 (KANIRV)
Square Portrait Landscape 4K UHD
ಮೆತೂಷೆಲಹನು ನೂರ ಎಂಭತ್ತೇಳು ವರ್ಷದವನಾದಾಗ ಲೆಮೆಕನನ್ನು ಪಡೆದನು.

ಆದಿಕಾಂಡ 5:26 (KANIRV)
Square Portrait Landscape 4K UHD
ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರ್ಷ ಬದುಕಿದನು.

ಆದಿಕಾಂಡ 5:27 (KANIRV)
Square Portrait Landscape 4K UHD
ಮೆತೂಷೆಲಹನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:28 (KANIRV)
Square Portrait Landscape 4K UHD
ಲೆಮೆಕನು ನೂರ ಎಂಭತ್ತೆರಡು ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.

ಆದಿಕಾಂಡ 5:29 (KANIRV)
Square Portrait Landscape 4K UHD
ಅವನಿಗೆ “ನೋಹ” ಎಂದು ಹೆಸರಿಟ್ಟು, “ಯೆಹೋವನು ಶಾಪಕೊಟ್ಟ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಅನುಭವಿಸುತ್ತಿರುವ ಶ್ರಮೆಗೆ ಈ ಮಗನಿಂದ ಆದರಣೆ ಸಿಕ್ಕುವುದು” ಎಂದು ಹೇಳಿದನು.

ಆದಿಕಾಂಡ 5:30 (KANIRV)
Square Portrait Landscape 4K UHD
ನೋಹನು ಹುಟ್ಟಿದ ಮೇಲೆ ಲೆಮೆಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರ ತೊಂಭತ್ತೈದು ವರ್ಷ ಬದುಕಿದನು.

ಆದಿಕಾಂಡ 5:31 (KANIRV)
Square Portrait Landscape 4K UHD
ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿ ನಂತರ ಸತ್ತನು.

ಆದಿಕಾಂಡ 5:32 (KANIRV)
Square Portrait Landscape 4K UHD
ನೋಹನು ಐನೂರು ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಗಂಡು ಮಕ್ಕಳನ್ನು ಪಡೆದನು.

Available Bible Translations

American Standard Version
Genesis 5 (ASV) »
King James Version
Genesis 5 (KJV) »
GOD’S WORD® (GW)
Genesis 5 (GW) »
World English Bible
Genesis 5 (WEB) »
Louis Segond 1910
Genèse 5 (LSG) »
Luther Bibel 1912
Genesis 5 (LUTH1912) »
इंडियन रिवाइज्ड वर्जन - हिंदी
उत्पत्ति 5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪੈਦਾਇਸ਼ 5 (PANIRV) »
ভারতীয় সংশোধিত সংস্করণ - বাংলা
আদি 5 (BENIRV) »
இந்தியன் ரீவைஸ்டு வேர்ஷன் - தமிழ்
ஆதியாகமம் 5 (TAMIRV) »
इंडियन रिवाइज्ड वर्जन - मराठी
उत्पत्ति 5 (MARIRV) »
ఇండియన్ రేవిజ్డ్ వెర్షన్ - తెలుగు
ఆదికాండం 5 (TELIRV) »
ઇન્ડિયન રિવાયઝ્ડ વર્ઝન - ગુજરાતી
ઉત્પત્તિ 5 (GUJIRV) »
الكتاب المقدس باللغة العربية، فان دايك
اَلتَّكْوِينُ 5 (AVD) »
תנ ך עברי מודרני
בראשית 5 (HEB) »
Bíblia Sagrada Português
Gênesis 5 (BSL) »
Kinh Thánh: Tiếng Việt
Sáng Thế 5 (VIE) »
Reina Valera Antigua
Génesis 5 (RVA) »
La Sacra Bibbia
Genesi 5 (RIV) »
圣 经 简体中文和合本
创 世 纪 5 (CUVS) »
聖 經 繁體中文和合本
創 世 記 5 (CUVT) »
Bibla e Shenjtë
Zanafilla 5 (ALB) »
Svenska Bibeln 1917
1 Mosebok 5 (SV1917) »
Библия на русском
Бытие 5 (RUSV) »
Українська Біблія
Буття 5 (UKR) »
Szent Biblia - Magyar
1 Mózes 5 (KAR) »
Българска Библия
Битие 5 (BULG) »
聖書 日本語
創世記 5 (JPN) »
Biblia Takatifu
Mwanzo 5 (SWHULB) »
Kitaabka Quduuska Ah
Bilowgii 5 (SOM) »
De Heilige Schrift
Genesis 5 (NLD) »
Dansk Bibel 1871
1 Mosebog 5 (DA1871) »

ಆದಿಕಾಂಡ (KANIRV) Chapter Selection

KANIRV Book Selection List