ಅರಣ್ಯಕಾಂಡ Chapter 33 KANIRV Bible Verse Images

ಅರಣ್ಯಕಾಂಡ 33 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಅರಣ್ಯಕಾಂಡ 33 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಅರಣ್ಯಕಾಂಡ 33:1 (KANIRV)
Square Portrait Landscape 4K UHD
ಮೋಶೆ ಮತ್ತು ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ಸೈನ್ಯಸೈನ್ಯವಾಗಿ ಹೊರಟ ಇಸ್ರಾಯೇಲರ ಪ್ರಯಾಣಗಳ ವಿವರ:

ಅರಣ್ಯಕಾಂಡ 33:2 (KANIRV)
Square Portrait Landscape 4K UHD
ಮೋಶೆ ಯೆಹೋವನ ಅಪ್ಪಣೆಯ ಪ್ರಕಾರ ಇಸ್ರಾಯೇಲರ ಪ್ರಯಾಣಗಳ ವಿವರಗಳನ್ನು ಬರೆದನು.

ಅರಣ್ಯಕಾಂಡ 33:3 (KANIRV)
Square Portrait Landscape 4K UHD
ಮೊದಲನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಪಸ್ಕಹಬ್ಬದ ಮರುದಿನದಲ್ಲಿ ಇಸ್ರಾಯೇಲರು ಐಗುಪ್ತ್ಯರ ಎದುರಿನಲ್ಲೇ ರಮ್ಸೇಸಿನಿಂದ ಹೊರಟರು.

ಅರಣ್ಯಕಾಂಡ 33:4 (KANIRV)
Square Portrait Landscape 4K UHD
ಆ ಕಾಲದಲ್ಲಿ ಯೆಹೋವನು ಐಗುಪ್ತ್ಯರ ದೇವತೆಗಳನ್ನು ಶಿಕ್ಷಿಸಿ, ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದ್ದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿಮಾಡುತ್ತಿದ್ದರು.

ಅರಣ್ಯಕಾಂಡ 33:5 (KANIRV)
Square Portrait Landscape 4K UHD
ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:6 (KANIRV)
Square Portrait Landscape 4K UHD
ಸುಕ್ಕೋತಿನಿಂದ ಹೊರಟು ಅರಣ್ಯದ ಅಂಚಿನಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:7 (KANIRV)
Square Portrait Landscape 4K UHD
ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿನ ಪೂರ್ವದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:8 (KANIRV)
Square Portrait Landscape 4K UHD
ಪೀಹಹೀರೋತಿನಿಂದ ಹೊರಟು ಸಮುದ್ರದ ಮಧ್ಯದಲ್ಲೇ ನಡೆದು ಅರಣ್ಯಕ್ಕೆ ಬಂದರು. ಏತಾಮಿನ ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ಮಾರಾ ಎಂಬ ಸ್ಥಳದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:9 (KANIRV)
Square Portrait Landscape 4K UHD
ಮಾರಾದಿಂದ ಹೊರಟು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರದ ಮರಗಳೂ ಇದ್ದುದರಿಂದ ಅಲ್ಲಿಯೇ ಇಳಿದುಕೊಂಡರು.

ಅರಣ್ಯಕಾಂಡ 33:10 (KANIRV)
Square Portrait Landscape 4K UHD
ಏಲೀಮಿನಿಂದ ಹೊರಟು ಕೆಂಪು ಸಮುದ್ರದ ದಡದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:11 (KANIRV)
Square Portrait Landscape 4K UHD
ಕೆಂಪು ಸಮುದ್ರದಿಂದ ಹೊರಟು ಸೀನ್ ಮರುಭೂಮಿಯಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:12 (KANIRV)
Square Portrait Landscape 4K UHD
ಸೀನ್ ಮರುಭೂಮಿಯಿಂದ ಹೊರಟು ದೊಪ್ಕದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:13 (KANIRV)
Square Portrait Landscape 4K UHD
ದೊಪ್ಕದಿಂದ ಹೊರಟು ಆಲೂಷಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:14 (KANIRV)
Square Portrait Landscape 4K UHD
ಆಲೂಷಿನಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಸಿಕ್ಕಲಿಲ್ಲ.

ಅರಣ್ಯಕಾಂಡ 33:15 (KANIRV)
Square Portrait Landscape 4K UHD
ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:16 (KANIRV)
Square Portrait Landscape 4K UHD
ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:17 (KANIRV)
Square Portrait Landscape 4K UHD
ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:18 (KANIRV)
Square Portrait Landscape 4K UHD
ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:19 (KANIRV)
Square Portrait Landscape 4K UHD
ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:20 (KANIRV)
Square Portrait Landscape 4K UHD
ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:21 (KANIRV)
Square Portrait Landscape 4K UHD
ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:22 (KANIRV)
Square Portrait Landscape 4K UHD
ರಿಸ್ಸದಿಂದ ಹೊರಟು ಕೆಹೇಲಾತದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:23 (KANIRV)
Square Portrait Landscape 4K UHD
ಕೆಹೇಲಾತದಿಂದ ಹೊರಟು ಶೆಫೆರ್ ಬೆಟ್ಟದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:24 (KANIRV)
Square Portrait Landscape 4K UHD
ಶೆಫೆರ್ ಬೆಟ್ಟದಿಂದ ಹೊರಟು ಹರಾದದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:25 (KANIRV)
Square Portrait Landscape 4K UHD
ಹರಾದದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:26 (KANIRV)
Square Portrait Landscape 4K UHD
ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:27 (KANIRV)
Square Portrait Landscape 4K UHD
ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:28 (KANIRV)
Square Portrait Landscape 4K UHD
ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:29 (KANIRV)
Square Portrait Landscape 4K UHD
ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:30 (KANIRV)
Square Portrait Landscape 4K UHD
ಹಷ್ಮೋನದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:31 (KANIRV)
Square Portrait Landscape 4K UHD
ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:32 (KANIRV)
Square Portrait Landscape 4K UHD
ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:33 (KANIRV)
Square Portrait Landscape 4K UHD
ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:34 (KANIRV)
Square Portrait Landscape 4K UHD
ಯೊಟ್ಬಾತದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:35 (KANIRV)
Square Portrait Landscape 4K UHD
ಅಬ್ರೋನದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:36 (KANIRV)
Square Portrait Landscape 4K UHD
ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:37 (KANIRV)
Square Portrait Landscape 4K UHD
ಕಾದೇಶಿನಿಂದ ಹೊರಟು ಎದೋಮ್ಯರ ದೇಶದ ಅಂಚಿನಲ್ಲಿರುವ ಹೋರ್ ಬೆಟ್ಟದ ಬಳಿಯಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:38 (KANIRV)
Square Portrait Landscape 4K UHD
ಮಹಾಯಾಜಕನಾದ ಆರೋನನು ಯೆಹೋವನಿಂದ ಅಪ್ಪಣೆಯನ್ನು ಹೊಂದಿ ಹೋರ್ ಬೆಟ್ಟವನ್ನು ಹತ್ತಿ, ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ನಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಅಲ್ಲೇ ಪ್ರಾಣಬಿಟ್ಟನು.

ಅರಣ್ಯಕಾಂಡ 33:39 (KANIRV)
Square Portrait Landscape 4K UHD
ಆರೋನನು ಹೋರ್ ಬೆಟ್ಟದಲ್ಲಿ ಸತ್ತಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.

ಅರಣ್ಯಕಾಂಡ 33:40 (KANIRV)
Square Portrait Landscape 4K UHD
ಇಸ್ರಾಯೇಲರು ಬರುತ್ತಾರೆಂಬ ವರ್ತಮಾನವನ್ನು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಕೇಳಿದನು.

ಅರಣ್ಯಕಾಂಡ 33:41 (KANIRV)
Square Portrait Landscape 4K UHD
ಇಸ್ರಾಯೇಲರು ಹೋರ್ ಬೆಟ್ಟದಿಂದ ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:42 (KANIRV)
Square Portrait Landscape 4K UHD
ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:43 (KANIRV)
Square Portrait Landscape 4K UHD
ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:44 (KANIRV)
Square Portrait Landscape 4K UHD
ಓಬೋತಿನಿಂದ ಹೊರಟು ಮೋವಾಬ್ಯರ ಗಡಿಯಲ್ಲಿರುವ ಯೊರ್ದನ್ ನದಿಯ ಆಚೆಯಿರುವ ಇಯ್ಯೀಮಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:45 (KANIRV)
Square Portrait Landscape 4K UHD
ಇಯ್ಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:46 (KANIRV)
Square Portrait Landscape 4K UHD
ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:47 (KANIRV)
Square Portrait Landscape 4K UHD
ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ಅಬಾರೀಮ್ ಬೆಟ್ಟಗಳಲ್ಲಿರುವ ನೇಬೋವಿನ ಪೂರ್ವದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:48 (KANIRV)
Square Portrait Landscape 4K UHD
ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋ ಪಟ್ಟಣದ ಹತ್ತಿರ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:49 (KANIRV)
Square Portrait Landscape 4K UHD
ಅವರು ಮೋವಾಬ್ಯರ ಮೈದಾನದಲ್ಲಿ ಬೇತ್ ಯೆಷೀಮೋತಿನಿಂದ ಆಬೇಲ್ ಶಿಟ್ಟೀಮಿನವರೆಗೂ ಯೊರ್ದನ್ ನದಿಯ ತೀರದಲ್ಲಿ ಇಳಿದುಕೊಂಡರು.

ಅರಣ್ಯಕಾಂಡ 33:50 (KANIRV)
Square Portrait Landscape 4K UHD
ಯೊರ್ದನ್ ನದಿಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ,

ಅರಣ್ಯಕಾಂಡ 33:51 (KANIRV)
Square Portrait Landscape 4K UHD
“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನೀವು ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಸೇರಿದಾಗ,

ಅರಣ್ಯಕಾಂಡ 33:52 (KANIRV)
Square Portrait Landscape 4K UHD
ಆ ದೇಶದ ನಿವಾಸಿಗಳನ್ನೆಲ್ಲಾ ಹೊರಡಿಸಿಬಿಟ್ಟು ಅವರ ವಿಚಿತ್ರವಾದ ಕಲ್ಲುಗಳನ್ನೂ, ಲೋಹವಿಗ್ರಹಗಳನ್ನೂ ನಾಶಮಾಡಿ ಅವರ ಪೂಜಾಸ್ಥಳಗಳನ್ನು ಹಾಳುಮಾಡಬೇಕು.

ಅರಣ್ಯಕಾಂಡ 33:53 (KANIRV)
Square Portrait Landscape 4K UHD
ನಾನು ನಿಮಗೆ ಆ ದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟದರಿಂದ ನೀವು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಬೇಕು.

ಅರಣ್ಯಕಾಂಡ 33:54 (KANIRV)
Square Portrait Landscape 4K UHD
ನೀವು ಚೀಟುಹಾಕಿ ಆ ದೇಶವನ್ನು ನಿಮ್ಮನಿಮ್ಮ ಕುಟುಂಬಗಳಿಗೆ ಹಂಚಿಕೊಳ್ಳಬೇಕು. ಹೆಚ್ಚು ಮಂದಿಯುಳ್ಳ ಕುಟುಂಬಕ್ಕೆ ಹೆಚ್ಚಾಗಿಯೂ, ಕಡಿಮೆಯಾದ ಕುಟುಂಬಕ್ಕೆ ಕಡಿಮೆಯಾಗಿಯೂ ಸ್ವತ್ತು ದೊರಕಬೇಕು. ಒಂದೊಂದು ಕುಟುಂಬದ ಚೀಟು ಯಾವ ಯಾವ ಸ್ಥಳವನ್ನು ಸೂಚಿಸುವುದೋ ಆ ಸ್ಥಳದಲ್ಲಿಯೇ ಆ ಕುಟುಂಬದ ಸ್ವಾಸ್ತ್ಯವಿರಬೇಕು. ಒಂದೊಂದು ಕುಲದ ಕುಟುಂಬಗಳು ಒಂದೇ ಪ್ರದೇಶದಲ್ಲಿರಬೇಕು.

ಅರಣ್ಯಕಾಂಡ 33:55 (KANIRV)
Square Portrait Landscape 4K UHD
ನೀವು ದೇಶದ ನಿವಾಸಿಗಳನ್ನು ಹೊರಡಿಸಿಬಿಡದೆ ಹೋದರೆ ಅವರಲ್ಲಿ ನೀವು ಉಳಿಸಿದವರು ನಿಮಗೆ ಕಣ್ಣುಚುಚ್ಚುವ ಮುಳ್ಳುಗಳಂತೆಯೂ, ಪಕ್ಕೆತಿವಿಯುವ ಶೂಲಗಳಂತೆಯೂ, ಆಗಿ ನೀವು ವಾಸಿಸುವ ದೇಶದಲ್ಲಿ ನಿಮಗೆ ಕಂಟಕರಾಗಿರುವರು.

ಅರಣ್ಯಕಾಂಡ 33:56 (KANIRV)
Square Portrait Landscape 4K UHD
ಅದಲ್ಲದೆ ನಾನು ಅವರಿಗೆ ಏನು ಮಾಡಬೇಕೆಂದು ಯೋಚಿಸಿದೇನೋ ಹಾಗೆ ನಿಮಗೂ ಮಾಡುವೆನು.’”

Available Bible Translations

American Standard Version
Numbers 33 (ASV) »
King James Version
Numbers 33 (KJV) »
GOD’S WORD® (GW)
Numbers 33 (GW) »
World English Bible
Numbers 33 (WEB) »
Louis Segond 1910
Nombres 33 (LSG) »
Luther Bibel 1912
Numeri 33 (LUTH1912) »
इंडियन रिवाइज्ड वर्जन - हिंदी
गिनती 33 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 33 (PANIRV) »
ভারতীয় সংশোধিত সংস্করণ - বাংলা
গননা 33 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 33 (TAMIRV) »
इंडियन रिवाइज्ड वर्जन - मराठी
गणना 33 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 33 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 33 (GUJIRV) »
الكتاب المقدس باللغة العربية، فان دايك
اَلْعَدَد 33 (AVD) »
תנ ך עברי מודרני
במדבר 33 (HEB) »
Bíblia Sagrada Português
Números 33 (BSL) »
Kinh Thánh: Tiếng Việt
Dân Số 33 (VIE) »
Reina Valera Antigua
Números 33 (RVA) »
La Sacra Bibbia
Numeri 33 (RIV) »
圣 经 简体中文和合本
民 数 记 33 (CUVS) »
聖 經 繁體中文和合本
民 數 記 33 (CUVT) »
Bibla e Shenjtë
Numrat 33 (ALB) »
Svenska Bibeln 1917
4 Mosebok 33 (SV1917) »
Библия на русском
Числа 33 (RUSV) »
Українська Біблія
Числа 33 (UKR) »
Szent Biblia - Magyar
4 Mózes 33 (KAR) »
Българска Библия
Числа 33 (BULG) »
聖書 日本語
民数記 33 (JPN) »
Biblia Takatifu
Hesabu 33 (SWHULB) »
Kitaabka Quduuska Ah
Tirintii 33 (SOM) »
De Heilige Schrift
Numberi 33 (NLD) »

ಅರಣ್ಯಕಾಂಡ (KANIRV) Chapter Selection

KANIRV Book Selection List