ಎಜ್ರನು Chapter 8 KANIRV Bible Verse Images

ಎಜ್ರನು 8 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಎಜ್ರನು 8 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಎಜ್ರನು 8:1 (KANIRV)
Square Portrait Landscape 4K UHD
ಅರ್ತಷಸ್ತ ರಾಜನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ.

ಎಜ್ರನು 8:2 (KANIRV)
Square Portrait Landscape 4K UHD
ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್; ದಾವೀದನ ಸಂತಾನದವರಲ್ಲಿ ಶೆಕನ್ಯನ ಮೊಮ್ಮಗನಾದ ಹಟ್ಟೂಷ್.

ಎಜ್ರನು 8:3 (KANIRV)
Square Portrait Landscape 4K UHD
ಪರೋಷಿನವರಲ್ಲಿ ಜೆಕರ್ಯನೂ ಅವನೊಡನೆ ಶೆಕನ್ಯನ ವಂಶಕ್ಕೆ ಸೇರುವ 150 ಗಂಡಸರು.

ಎಜ್ರನು 8:4 (KANIRV)
Square Portrait Landscape 4K UHD
ಪಹತ್ ಮೋವಾಬಿನವರಲ್ಲಿ ಜೆರಹ್ಯನ ಮಗನಾದ ಎಲ್ಯೆಹೋವೇನೈಯೂ ಮತ್ತು ಅವನೊಡನೆ 200 ಗಂಡಸರು.

ಎಜ್ರನು 8:5 (KANIRV)
Square Portrait Landscape 4K UHD
ಜತ್ತೂವಿನವರಲ್ಲಿ ಯಹಜೀಯೇಲನ ಮಗನಾದ ಶೆಕನ್ಯನೂ ಹಾಗೂ ಅವನೊಡನೆ 300 ಗಂಡಸರು.

ಎಜ್ರನು 8:6 (KANIRV)
Square Portrait Landscape 4K UHD
ಆದೀನನವರಲ್ಲಿ ಯೋನಾತಾನನ ಮಗನಾದ ಎಬೆದನೂ ಅವನೊಡನೆ 50 ಗಂಡಸರು.

ಎಜ್ರನು 8:7 (KANIRV)
Square Portrait Landscape 4K UHD
ಏಲಾಮಿನವರಲ್ಲಿ ಅತಲ್ಯನ ಮಗನಾದ ಯೆಶಾಯನೂ ಅವನೊಡನೆ 70 ಗಂಡಸರು.

ಎಜ್ರನು 8:8 (KANIRV)
Square Portrait Landscape 4K UHD
ಶೆಫಟ್ಯನವರಲ್ಲಿ ಮಿಕಾಯೇಲನ ಮಗನಾದ ಜೆಬದ್ಯನೂ ಅವನೊಡನೆ 80 ಗಂಡಸರು.

ಎಜ್ರನು 8:9 (KANIRV)
Square Portrait Landscape 4K UHD
ಯೋವಾಬನವರಲ್ಲಿ ಯೆಹೀಯೇಲನ ಮಗನಾದ ಓಬದ್ಯನೂ ಅವನೊಡನೆ 218 ಗಂಡಸರು.

ಎಜ್ರನು 8:10 (KANIRV)
Square Portrait Landscape 4K UHD
ಬಾನೀಯವರಲ್ಲಿ ಯೋಸಿಫ್ಯನ ಮಗನಾದ ಶಿಲೋಮೀತನೂ ಅವನೊಡನೆ 160 ಗಂಡಸರು.

ಎಜ್ರನು 8:11 (KANIRV)
Square Portrait Landscape 4K UHD
ಬೇಬೈಯವರಲ್ಲಿ ಬೇಬೈಯ ಮಗನಾದ ಜೆಕರ್ಯನೂ ಅವನೊಡನೆ 28 ಗಂಡಸರು.

ಎಜ್ರನು 8:12 (KANIRV)
Square Portrait Landscape 4K UHD
ಅಜ್ಗಾದನವರಲ್ಲಿ ಹಕ್ಕಾಟಾನನ ಮಗನಾದ ಯೋಹಾನಾನನೂ ಅವನೊಡನೆ 110 ಗಂಡಸರು.

ಎಜ್ರನು 8:13 (KANIRV)
Square Portrait Landscape 4K UHD
ಅದೋನೀಕಾಮಿನವರಲ್ಲಿ ಕಡೆಯವರಾದ ಎಲೀಫೆಲೆಟ್, ಎಮೀಯೇಲ್, ಶೆಮಾಯ ಎಂಬ ಹೆಸರುಳ್ಳವರೂ ಅವರೊಡನೆ 60 ಗಂಡಸರು.

ಎಜ್ರನು 8:14 (KANIRV)
Square Portrait Landscape 4K UHD
ಬಿಗ್ವೈಯವರಲ್ಲಿ ಜಕ್ಕೂರನ ಮಗನಾದ ಊತೈಯೂ ಅವನೊಡನೆ 70 ಗಂಡಸರು.

ಎಜ್ರನು 8:15 (KANIRV)
Square Portrait Landscape 4K UHD
ಅಹವಾ ಪ್ರಾಂತ್ಯದ ಕಡೆಗೆ ಹರಿಯುವ ನದಿಯ ಬಳಿಯಲ್ಲಿ ನಾನು ಇವರನ್ನು ಕೂಡಿಸಿದೆನು. ಅಲ್ಲಿ ಮೂರು ದಿನ ಪಾಳೆಯಮಾಡಿಕೂಂಡ ಮೇಲೆ ಸಾಧಾರಣ ಜನರೂ, ಯಾಜಕರೂ ಬಂದಿದ್ದಾರೆ, ಲೇವಿಯರಲ್ಲಿ ಯಾರೂ ಬರಲಿಲ್ಲ ಎಂದು ಕಂಡುಬಂತು.

ಎಜ್ರನು 8:16 (KANIRV)
Square Portrait Landscape 4K UHD
ಆದುದರಿಂದ ನಾನು ಪ್ರಧಾನರಾದ ಎಲೀಯೆಜೆರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ, ಮೆಷುಲ್ಲಾಮ್ ಇವರನ್ನೂ, ಪಂಡಿತರಾದ ಯೋಯಾರೀಬ್ ಎಲ್ನಾತಾನ್ ಇವರನ್ನೂ ಕರೆಯಿಸಿದೆನು.

ಎಜ್ರನು 8:17 (KANIRV)
Square Portrait Landscape 4K UHD
ಅವರ ತರುವಾಯ ನಾನು ಕಾಸಿಫ್ಯ ಊರಿನ ಮುಖ್ಯಸ್ಥನಾದ ಇದ್ದೋವಿನ ಬಳಿಗೆ ಹೋಗಬೇಕೆಂದು ಅಪ್ಪಣೆಮಾಡಿ, ನಮ್ಮ ಬಳಿಗೆ ದೇವಾಲಯ ಸೇವಕರನ್ನು ಕಳುಹಿಸುವ ಹಾಗೆ, ಅವರು ಇದ್ದೋವಿಗೂ ಕಾಸಿಫ್ಯ ಊರಿನಲ್ಲಿ ವಾಸಿಸುತ್ತಿದ್ದ ಅವನ ಸಹೋದರರಾದ ದೇವಸ್ಥಾನದ ಪರಿಚಾರಕರಿಗೂ ಹೇಳತಕ್ಕ ಮಾತುಗಳನ್ನು ಹೇಳಿಕೊಟ್ಟೆನು. ಆ ಊರಿನವರು ದೇವದಾಸವರ್ಗದವರಷ್ಟೆ.

ಎಜ್ರನು 8:18 (KANIRV)
Square Portrait Landscape 4K UHD
ನಮ್ಮ ದೇವರ ಕೃಪಾಶೀರ್ವಾದ ನಮಗೆ ದೊರೆಕ್ಕಿದ್ದರಿಂದ ಅವರು ಇಸ್ರಾಯೇಲನ ಮಗನಾದ ಲೇವಿಯ ಕುಲದ ಮಹ್ಲೀ ಸಂತಾನದವರಲ್ಲಿ ಈಸ್ಸೆಕೆಲನನ್ನೂ, ಶೇರೇಬ್ಯನನ್ನೂ ಅವನ ಪುತ್ರಭ್ರಾತೃಗಳಲ್ಲಿ ಹದಿನೆಂಟು ಜನರನ್ನೂ,

ಎಜ್ರನು 8:19 (KANIRV)
Square Portrait Landscape 4K UHD
ಮೆರಾರೀಯರಲ್ಲಿ ಹಷಬ್ಯನನ್ನೂ ಅವನೊಡನೆ ಯೆಶಾಯನನ್ನೂ, ಅವರ ಪುತ್ರ ಸಹೋದರರಲ್ಲಿ ಇಪ್ಪತ್ತು ಜನರು,

ಎಜ್ರನು 8:20 (KANIRV)
Square Portrait Landscape 4K UHD
ದಾವೀದನೂ ಅವನ ಮುಖ್ಯಸ್ಥರನ್ನು ಲೇವಿಯರೊಂದಿಗೆ ಸೇವೆಗಾಗಿ ಕೊಟ್ಟು ದೇವಸ್ಥಾನ ಪರಿಚಾರಕರಲ್ಲಿ ಇನ್ನೂರಿಪ್ಪತ್ತು ಜನರನ್ನೂ ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

ಎಜ್ರನು 8:21 (KANIRV)
Square Portrait Landscape 4K UHD
ಆ ಮೇಲೆ ಆ ಅಹವಾ ನದಿಯ ಬಳಿಯಲ್ಲಿ ನಾವು ಉಪವಾಸದಿಂದಿದ್ದು, ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲಾ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಬೇಡಿಕೊಳ್ಳಬೇಕೆಂದು ಉಪವಾಸವನ್ನು ಪ್ರಕಟಿಸಿದನು.

ಎಜ್ರನು 8:22 (KANIRV)
Square Portrait Landscape 4K UHD
ನಮ್ಮ ದೇವರ ಹಸ್ತವು ಆತನ ಎಲ್ಲಾ ಶರಣಾರ್ಥಿಗಳನ್ನೂ ಪಾಲಿಸುವುದು; ಆತನನ್ನು ತೊರೆದುಬಿಟ್ಟವರೆಲ್ಲರೂ ಆತನ ಉಗ್ರವಾದ ಕೋಪಕ್ಕೆ ಗುರಿಯಾಗುವರು. ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕೋಸ್ಕರ ಸೈನ್ಯವನ್ನೂ, ಅಶ್ವಬಲವನ್ನೂ ಕೊಡಲು ಅರಸನಿಂದ ಸಹಾಯ ಕೇಳಲು ನಾಚಿಕೊಂಡಿದ್ದೆನು.

ಎಜ್ರನು 8:23 (KANIRV)
Square Portrait Landscape 4K UHD
ಆದುದರಿಂದ ನಾವು ಉಪವಾಸಮಾಡಿ ದೇವರನ್ನು ಪ್ರಾರ್ಥಿಸಲು ಆತನು ನಮಗೆ ಪ್ರಸನ್ನನಾದನು.

ಎಜ್ರನು 8:24 (KANIRV)
Square Portrait Landscape 4K UHD
ಅನಂತರ ನಾನು ಯಾಜಕರ ಮುಖ್ಯಸ್ಥರಲ್ಲಿ ಶೇರೇಬ್ಯ, ಹಷಬ್ಯ ಇವರ ಸಹೋದರರಲ್ಲಿ ಹತ್ತು ಜನರನ್ನೂ ಆರಿಸಿಕೊಂಡು ಅರಸನಿಂದಲೂ, ಅವನ ಮಂತ್ರಿಗಳಿಂದಲೂ, ಸರದಾರರಿಂದಲೂ ಮತ್ತು

ಎಜ್ರನು 8:25 (KANIRV)
Square Portrait Landscape 4K UHD
ಇಸ್ರಾಯೇಲರಿಂದಲೂ ನಮ್ಮ ದೇವರ ಆಲಯಕ್ಕೋಸ್ಕರ ಕಾಣಿಕೆಯಾಗಿ ಕೊಡಲ್ಪಟ್ಟ ಬೆಳ್ಳಿ ಬಂಗಾರವನ್ನೂ, ಸಾಮಾನುಗಳನ್ನೂ ತೂಕಮಾಡಿ ಅವರಿಗೆ ಒಪ್ಪಿಸಿದೆನು.

ಎಜ್ರನು 8:26 (KANIRV)
Square Portrait Landscape 4K UHD
ಅವರ ಕೈಯಲ್ಲಿ ಕೊಟ್ಟ ಬೆಲೆಬಾಳುವ ಸಾಮಾನುಗಳ ತೂಕ: ಬೆಳ್ಳಿಯು ಆರುನೂರೈವತ್ತು ತಲಾಂತು, ಬಂಗಾರವು ನೂರು ತಲಾಂತು,

ಎಜ್ರನು 8:27 (KANIRV)
Square Portrait Landscape 4K UHD
ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ ಸಾವಿರ ಪವನು; ಇವುಗಳಲ್ಲದೆ ಶ್ರೇಷ್ಠವಾದ ಶುಭ್ರತಾಮ್ರದ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.

ಎಜ್ರನು 8:28 (KANIRV)
Square Portrait Landscape 4K UHD
ನಾನು ಅವರಿಗೆ, “ನೀವು ಯೆಹೋವನ ಸ್ವಕೀಯರು; ಆ ಪಾತ್ರೆಗಳೂ, ದೇವರ ವಸ್ತುಗಳು; ಆ ಬೆಳ್ಳಿಬಂಗಾರವೂ ನಿಮ್ಮ ಪೂರ್ವಿಕರ ದೇವರಾದ ಯೆಹೋವನಿಗೋಸ್ಕರ ಸಮರ್ಪಿತವಾದ ಕಾಣಿಕೆಯು.

ಎಜ್ರನು 8:29 (KANIRV)
Square Portrait Landscape 4K UHD
ಆದುದರಿಂದ ನೀವು ಜಾಗರೂಕರಾಗಿದ್ದು ಯೆರೂಸಲೇಮಿನಲ್ಲಿರುವ ಯಾಜಕರ ಮತ್ತು ಲೇವಿಯರ ಪ್ರಧಾನರ ಮುಂದೆಯೂ ಇವುಗಳನ್ನು ತೂಕಮಾಡಿ ಯೆಹೋವನ ಆಲಯದ ಕೊಠಡಿಗಳಲ್ಲಿ ಇಡುವವರೆಗೂ ಕಾಯಿರಿ” ಎಂದು ಹೇಳಿದನು.

ಎಜ್ರನು 8:30 (KANIRV)
Square Portrait Landscape 4K UHD
ಆ ಯಾಜಕರೂ ಮತ್ತು ಲೇವಿಯರೂ, ಯೆರೂಸಲೇಮಿನ ದೇವಾಲಯಕ್ಕೆ ತಲುಪಿಸುವುದಕ್ಕೋಸ್ಕರ ಬೆಳ್ಳಿಬಂಗಾರವನ್ನೂ, ಉಪಕರಣಗಳನ್ನೂ ತೂಕಮಾಡಿಸಿ ತಮ್ಮ ವಶದಲ್ಲಿಟ್ಟುಕೊಂಡರು.

ಎಜ್ರನು 8:31 (KANIRV)
Square Portrait Landscape 4K UHD
ನಾವು ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಅಹವಾ ನದಿಯನ್ನು ಬಿಟ್ಟು ಯೆರೂಸಲೇಮಿಗೆ ಹೊರಟೆವು. ನಮ್ಮ ದೇವರ ಹಸ್ತವು ನಮ್ಮನ್ನು ಪಾಲಿಸುತ್ತಾ ಇತ್ತು. ಆತನು ಶತ್ರುಗಳ ಮತ್ತು ದಾರಿಯಲ್ಲಿ ಹೊಂಚುಹಾಕುವವರ ಕೈಗೆ ಸಿಕ್ಕದಂತೆ ನಮ್ಮನ್ನು ತಪ್ಪಿಸಿದನು.

ಎಜ್ರನು 8:32 (KANIRV)
Square Portrait Landscape 4K UHD
ನಾವು ಯೆರೂಸಲೇಮನ್ನು ಸೇರಿ ಮೂರು ದಿನ ವಿಶ್ರಮಿಸಿಕೊಂಡೆವು.

ಎಜ್ರನು 8:33 (KANIRV)
Square Portrait Landscape 4K UHD
ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗನಾದ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗನಾದ ಯೋಜಾಬಾದ್, ಬಿನ್ನೂಯನ ಮಗನಾದ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.

ಎಜ್ರನು 8:34 (KANIRV)
Square Portrait Landscape 4K UHD
ಆಗಲೇ ಎಲ್ಲವುಗಳ ತೂಕವು ಲಿಖಿತವಾಯಿತು.

ಎಜ್ರನು 8:35 (KANIRV)
Square Portrait Landscape 4K UHD
ದೇಶಾಂತರದ ಸೆರೆಯಿಂದ ಹಿಂತಿರುಗಿ ಬಂದವರು ಇಸ್ರಾಯೇಲರ ದೇವರಿಗೆ ತೊಂಭತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ಸಮಸ್ತ ಇಸ್ರಾಯೇಲರ ನಿಮಿತ್ತವಾಗಿ ಹನ್ನೆರಡು ಹೋತಗಳನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು. ಇವೆಲ್ಲಾ ಯೆಹೋವನಿಗೆ ಸರ್ವಾಂಗಹೋಮವೇ.

ಎಜ್ರನು 8:36 (KANIRV)
Square Portrait Landscape 4K UHD
ಆ ಮೇಲೆ ಅವರು ರಾಜಶಾಸನವನ್ನು ರಾಜೋದ್ಯೋಗಸ್ಥರಿಗೂ, ಹೊಳೆಯಾಚೆಯ ಪ್ರದೇಶಾಧಿಪತಿಗಳಿಗೂ ಒಪ್ಪಿಸಿದರು. ಇವರು ಜನರಿಗೂ ಮತ್ತು ದೇವಾಲಯಕ್ಕೂ ಸಹಾಯಮಾಡಿದರು.

Available Bible Translations

American Standard Version (ASV)
Ezra 8 (ASV) »
King James Version (KJV)
Ezra 8 (KJV) »
GOD’S WORD® (GW)
Ezra 8 (GW) »
Berean Bible (BSB)
Ezra 8 (BSB) »
World English Bible (WEB)
Ezra 8 (WEB) »
French Bible (LSG)
Esdras 8 (LSG) »
German Bible (LUTH1912)
Esra 8 (LUTH1912) »
Hindi Bible (HINIRV)
एज्रा 8 (HINIRV) »
Punjabi Bible (PANIRV)
ਅਜ਼ਰਾ 8 (PANIRV) »
Bengali Bible (BENIRV)
ইজ্ৰা 8 (BENIRV) »
Tamil Bible (TAMIRV)
எஸ்றா 8 (TAMIRV) »
Marathi Bible (MARIRV)
एज्रा 8 (MARIRV) »
Telugu Bible (TELIRV)
ఎజ్రా 8 (TELIRV) »
Gujarati Bible (GUJIRV)
એઝરા 8 (GUJIRV) »
Arabic Bible (AVD)
عَزْرَا 8 (AVD) »
Hebrew Bible (HEB)
עזרא 8 (HEB) »
Portuguese Bible (BSL)
Esdras 8 (BSL) »
Vietnamese Bible (VIE)
Ê-xơ-ra 8 (VIE) »
Spanish Bible (RVA)
Esdras 8 (RVA) »
Italian Bible (RIV)
Esdra 8 (RIV) »
Chinese Simplified (CUVS)
以 斯 拉 记 8 (CUVS) »
Chinese Traditional (CUVT)
以 斯 拉 記 8 (CUVT) »
Albanian Bible (ALB)
Esdra 8 (ALB) »
Swedish Bible (SV1917)
Esra 8 (SV1917) »
Russian Bible (RUSV)
Ездра 8 (RUSV) »
Ukrainian Bible (UKR)
Ездра 8 (UKR) »
Hungarian Bible (KAR)
Ezsdrás 8 (KAR) »
Bulgarian Bible (BULG)
Ездра 8 (BULG) »
Japanese Bible (JPN)
エズラ記 8 (JPN) »
Norwegian Bible (NORSK)
Esra 8 (NORSK) »

ಎಜ್ರನು (KANIRV) Chapter Selection

1 2 3 4 5 6 7 8 9 10

KANIRV Book Selection List